ಕಾಪ್ರೋಯಿಕ್ ಆಮ್ಲವು ಒಂದು ಪರ್ಯಾಪ್ತ ಕೊಬ್ಬಿನ ಆಮ್ಲ. ಇದು ವೋನೋಕಾರ್ಬೋಕ್ಸಿಲಿಕ್ ಆಮ್ಲಗಳ ಸಮೂಹಕ್ಕೆ ಸೇರಿದ ಕಾರ್ಬನ ರಸಾಯನ ಆಮ್ಲವಾಗಿದೆ. ಇದು ಜಂತು/ಜೀವಿಗಳ ಕೊಬ್ಬಿನಲ್ಲಿ ಹೆಚ್ಚಾಗಿ ಕಾಣಿಸುವ ಪರ್ಯಾಪ್ತ ಕೊಬ್ಬಿನ ಆಮ್ಲ. == ಕಾರ್ಪೋಯಿಕ್ ಆಮ್ಲ ನಿರ್ಮಾಣ == ಕಾಪ್ರೋಯಿಕ್ ಆಮ್ಲ ಸರಳವಾದ ಹೈಡ್ರೋಕಾರ್ಬನ್ ಸರಪಳಿಯನ್ನು ಹೊಂದಿರುತ್ತದೆ. ಹೈಡ್ರೋಕಾರ್ಬನ್ ಸರಪಳಿಯಲ್ಲಿ ಕೊಂಬೆಗಳಿರುವುದಿಲ್ಲ. ಆಮ್ಲದಲ್ಲಿ ಕಾರ್ಬನ್ , ಹೈಡ್ರೋಜನ್, ಆಕ್ಸಿಜನ್ ಗಳಿರುತ್ತವೆ. ಹೈಡ್ರೋಕಾರ್ಬನ್ ಸರಪಳಿಯಲ್ಲಿರುವ ಕಾರ್ಬನ್-ಕಾರ್ಬನ್ ಕಡಿಮೆ ಏಕ ಬಂಧವಿರುತ್ತವೆ. ಏಕ ಬಂಧ ವಿರುವ ಕೊಬ್ಬಿನ ಆಮ್ಲಗಳನ್ನು ಪರ್ಯಾಪ ಕೊಬ್ಬಿನ ಆಮ್ಲಗಳು ಎಂದು ಕರೆಯುತ್ತರೆ. ಕಾಪ್ರೋಯಿಕ್ ಆಮ್ಲದ ಅಣುವಿನಲ್ಲಿ ೬ ಕಾರ್ಬನ್, ೧೨ ಹೈಡ್ರೋಜನ್,೨ ಆಕ್ಸಿಜನ್ ಪರಮಾಣುಗಳಿರುತ್ತವೆ. ಇದರ ಅಣು ಸಂಕೇತ ಸೂತ್ರ C5H11COOH. ಇನ್ನೊಂದು ತರಹ ಅಣು ಸಂಕೇತವು C6</ > 12O2ಆಗಿದೆ. ಕಾಪ್ರೋಯಿಕ್ ಆಮ್ಲದ ಶಾಸ್ತ್ರೀಯ ಹೆಸರು ಹೆಕ್ಸೆನೋಯಿಕ್ ಆಸಿಡ್( ). ೮ ಕಾರ್ಬನ್ ಗಳಿರುವ ಆಮ್ಲವನ್ನು ಕಾಪ್ರೀಲಿಕ್ ಆಮ್ಲವೆಂದು, ೧೦ ಕಾರ್ಬನ್ ಗಳಿರುವ ಆಮ್ಲವನ್ನು ಕಾಪ್ರಿಕ್ ಆಮ್ಲವೆಂದು ಕರೆಯಲಾಗುತ್ತದೆ. ಈ ಮೂರು ಕೊಬ್ಬಿನ ಆಮ್ಲಗಳು ಮೇಕೆ ಹಾಲಿನಲ್ಲಿ ಕಾಣಿಸುತ್ತವೆ. ಲಾಟಿನ್ ಭಾಷೆಯಲ್ಲಿ ಕಾಪರ್() ಎಂದರೆ ಮೇಕೆ ಎಂದರ್ಥ. ಆಮ್ಲದ ಭೌತಿಕ ಲಕ್ಷಣಗಳ ಪಟ್ಟಿ ಕಾಪ್ರೋಯಿಕ್ ಆಮ್ಲವನ್ನು ಕೆಳಗಿನ ಹೆಸರುಗಳಲ್ಲಿ ಕರೆಯಲಾಗುತ್ತದೆ - - - ಕಾಪ್ರೋಯಿಕ್ ಆಮ್ಲವು ಬಿಳುಪಾದ ಸ್ಪಟಿಕ ರೂಪದಲ್ಲಿರುತ್ತದೆ. ಕೆಟ್ಟ ವಾಸನೆ ಹೊಂದಿರುತ್ತದೆ. == ಉಪಯುಕ್ತಗಳು == ಹಸುರು ಮೇವು()ಎಯಿರೊಬಿಕ್() ಚರ್ಯೆ ಕಾರಣದಿಂದ ಹದಗೆಡುವುದನ್ನು ಕಾರ್ಪ್ರೊಯಿಕ್ ಆಮ್ಲ ತಡೆಯುತ್ತದೆ ಆಹಾರ ಪದಾರ್ಥಗಳಲ್ಲಿ ಸುವಾಸನೆ ಬರುವುದಕ್ಕೆ ಇದನ್ನು ಉಪಯೋಗಿಸಲಾಗುತ್ತದೆ == ತೊಂದರೆಗಳು == ಕಾಪ್ರೊಯಿಕ್ ಆಮ್ಲದಿಂದ ಕೆಳವು ತೊಂದರೆಗಳು ಇವೆ. ನೇರವಾಗಿ ಕಣ್ಣುಗಳಲ್ಲಿ ಬಿದ್ದರೆ, ಇಲ್ಲವೆ ಚರ್ಮದ ಮೇಲೆ ಅಂಟಿಕೊಂಡಿದ್ದರೆ ಉರಿಯುತ್ತದೆ. ಇದರ ಭಾಷ್ಪವನ್ನು ಶ್ವಾಸಿಸುವುದರಿಂದ ಉಸಿರಿನ ತೊಂದರೆ ಉಂಟಾಗುತ್ತದೆ == ಇವನ್ನೂ ನೋಡಿ == ಕೊಬ್ಬಿನ ಆಮ್ಲ ಪರ್ಯಾಪ್ತ ಆಮ್ಲ == ಬಾಹ್ಯಾಕೊಂಡಿಗಳು == ://../-.8552. == ಉಲ್ಲೇಖನ ==